ಕೋವಿಡ್-19 ಮುಂಜಾಗೃತ ಕ್ರಮಗಳು

ಕೋವಿಡ-೧೯ ಮುಂಜಾಗೃತಾ ಕ್ರಮಗಳು.
ವಿದ್ಯಾರ್ಥಿಗಳಾದ ನೀವು ದಿನಾಲು ಮುಂಜಾನೆ ಬೆಳಿಗ್ಗೆ ಎದ್ದು. ದೈನಂದಿನ ಕಾರ್ಯಗಳನ್ನು ಮುಗಿಸಿ. ಯೋಗ ಹಾಗೂ ಕೆಲವು ಸರಳ ವ್ಯಾಯಾಮಗಳನ್ನು ಮಾಡಬೇಕು.
ಹಾಗೆಯೇ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಕೋರೋನಾ.ಹಾವಳಿಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ಕಾರಣ ವಿದ್ಯಾರ್ಥಿಗಳಾದ ನೀವು ಮನೆಯಲ್ಲಿ ರೇಡಿಯೋ ದೂರದರ್ಶನ ಅಥವಾ ಟಿವಿ ಮೂಲಕ ಸರ್ಕಾರವು ನಿಗದಿಪಡಿಸಿದ ಕೆಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ನೋಡಬೇಕು ಪ್ರಮುಖವಾಗಿ ಈ ಶೈಕ್ಷಣಿಕ ಕಾರ್ಯಕ್ರಮಗಳು ಚಂದನ ವಾಹಿನಿಯಲ್ಲಿ ಮೂಡಿ ಬರುತ್ತದೆ ವಿದ್ಯಾರ್ಥಿಗಳ ನೀವು ದಿನಾಲು ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು ಯಾವುದೇ ವಸ್ತುವಿಗೆ ಮುಟ್ಟಿದಾಗ ಕೈಯನ್ನು ಮೂಗು ಬಾಯಿ ಕಣ್ಣು ಗಳಿಗೆ ಹಚ್ಚಬಾರದು.ವಿದ್ಯಾರ್ಥಿಗಳಾದ ನೀವು ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಗೆಳೆಯ-ಗೆಳತಿಯರಿಗೂ ಕೂಡ ಇದರ ಬಗ್ಗೆ ಬಹಳ ಕುಲಂಕುಶವಾಗಿ ಹಾಗೂ ಕಳಕಳಿಯಿಂದ ತಿಳಿಹೇಳಬೇಕು. ವಿದ್ಯಾರ್ಥಿಗಳು ದಿನಾಲು ನೀವು ಪ್ರತಿ ದಿವಸ ಒಂದು ಸುದ್ದಿ ಲೇಖನ ಪಾಠ ಕನ್ನಡ ಹಾಗೂ ಒಂದು ಇಂಗ್ಲೀಷ್ ಹಾಗೂ ಕೆಲವು ಸರಳ ಗಣಿತದ ಲೆಕ್ಕಗಳು ಮಾಡಬೇಕು

Comments